ಅಧಿಕಾರ
ಈ ಮಾತಿಗೆ ತತ್ತ್ವಶಾಸ್ತ್ರದಲ್ಲಿ ಯೋಗ್ಯತೆ, ಅರ್ಹತೆ ಎನ್ನುವ ಅರ್ಥವಿದೆ; ಕೆಲಸ ಮಾಡುವ ಮತ್ತು ಅದರಿಂದ ಉಂಟಾಗತಕ್ಕ ಫಲವನ್ನು ಅನುಭವಿಸುವ ಅರ್ಹತೆ ಇಲ್ಲಿ ಮುಖ್ಯವಾದ ವಿಚಾರ. ವರ್ಣಾಶ್ರಮವ್ಯವಸ್ಥೆಯಲ್ಲಿ ಅಧಿಕಾರದ ಪ್ರಸ್ತಾಪವುಂಟು. ಬ್ರಾಹ್ಮಣನಿಗೆ ಯಜನ, ಯಾಜನ, ಅಧ್ಯಯನ, ಅಧ್ಯಾಪನ, ದಾನ, ಪ್ರತಿಗ್ರಹ ಇವುಗಳ ಅಧಿಕಾರವೂ ಕ್ಷತ್ರಿಯ, ವೈಶ್ಯರಿಗೆ ಯಜನ, ಅಧ್ಯಯನ, ದಾನ ಇವುಗಳ ಅಧಿಕಾರವೂ ಇದೆ. ಅಧಿಕಾರವೆನ್ನುವ ಮಾತಿನಲ್ಲಿ ಉದ್ಯಮ, ಪ್ರಯತ್ನ ಎನ್ನುವ ಅರ್ಥವೂ ಸೇರಿಬರುತ್ತದೆ. ಕೃಷ್ಣ ಭಗವದ್ಗೀತೆಯಲ್ಲಿ ಕರ್ಮಣ್ಯೇವಾಧಿಕಾರಸ್ತೇ ಮಾ ಫಲೇಷು ಕದಾಚನ (3-47) ಎನ್ನುವಾಗ ಕರ್ಮಶೀಲನಾಗು, ಉದ್ಯಮಿಯಾಗು ಎಂದು ತಾತ್ಪರ್ಯ. ವಿಹಿತಕಾರ್ಯಗಳನ್ನು ಮಾಡಲು ಯೋಗ್ಯತೆಯನ್ನು ನಿರ್ಣಯಿಸುವುದಕ್ಕೆ ಅಧಿಕಾರವಿಧಿ ಎಂದು ಹೆಸರು. ಎಲ್ಲರಿಗೂ ಎಲ್ಲ ಕರ್ಮಗಳೂ ದಕ್ಕುವುದಿಲ್ಲ; ಸಾಮಥ್ರ್ಯತಾರತಮ್ಯದಿಂದ ಅವಗಾಹನ, ಅನುಷ್ಠಾನ ಎರಡೂ ಪ್ರಭಾವಿತವಾಗುತ್ತವೆ. ವೇದಾಧ್ಯಯನಕ್ಕೆ, ಜಪತಪಾದಿ ಸಾಧನಗಳಿಗೆ ಯಾರು ಅಧಿಕಾರಿಗಳು ಎಂದು ನಿರ್ಣಯಿಸಬೇಕಾಗುತ್ತದೆ. ಗೃಹಸ್ಥನಲ್ಲದವನಿಗೆ, ಉಪನೀತನಲ್ಲದವನಿಗೆ, ಮಂತ್ರಶಿಕ್ಷಣವಿಲ್ಲದವನಿಗೆ ಯಜ್ಞಮಾಡುವ ಅಧಿಕಾರವಿರದು. ದ್ವಿಜನಲ್ಲದವನಿಗೆ, ಬ್ರಹ್ಮಚಾರಿಯಾಗದವನಿಗೆ ವೇದಾಧ್ಯಯನದ ಅಧಿಕಾರವಿಲ್ಲ. ವೇದಾಧ್ಯಯನಕ್ಕೆ ಅಧಿಕಾರವಿಲ್ಲದ ಸ್ತ್ರೀಶೂದ್ರಾದಿಗಳು ಇತಿಹಾಸ ಪುರಾಣಗಳನ್ನು ಓದಬಹುದು. ಹೀಗೆಯೆ ಭಗವತ್ಸಾಕ್ಷಾತ್ಕಾರವನ್ನು ಪಡೆಯುವ ಇಷ್ಟ ಉಳ್ಳವರಿಗೆ ಅಧಿಕಾರಬೇಕು. ಎಲ್ಲರಿಗೂ ಉಪಾಸನಾಧಿಕಾರವಿರುವುದಿಲ್ಲ. ಅವರವರ ರುಚಿ, ಮನೋಧರ್ಮ, ವಿರಕ್ತಿ, ಶಕ್ತಿಗಳನ್ನು ಪರಿಗಣಿಸಿ ಅಧಿಕಾರವನ್ನು ನಿಶ್ವಯಿಸುತ್ತಾರೆ. ವೇದಾಂತ ಬ್ರಹ್ಮಜ್ಞಾನವನ್ನೇ ತಾತ್ಪರ್ಯವಾಗಿಟ್ಟುಕೊಂಡಿದೆಯಷ್ಟೆ. ಬ್ರಹ್ಮe್ಞÁನವನ್ನು ಪಡೆಯಬೇಕೆಂದರೂ ಅಧಿಕಾರವಿರಬೇಕು. ಬಾದರಾಯಣರ ಬ್ರಹ್ಮಸೂತ್ರಗಳಲ್ಲಿ ಮೊದಲನೆಯ ಸೂತ್ರವಾದ ಅಥಾತೋ ಬ್ರಹ್ಮಜಿe್ಞÁಸಾ ಎಂಬಲ್ಲಿ ಅಥ ಎನ್ನುವ ಮಾತಿಗೆ, ಅಧಿಕಾರ ಪಡೆದ ಮೇಲೆ ಎಂದು ಅರ್ಥ ಮಾಡುತ್ತಾರೆ. ಇಲ್ಲಿ ಅಧಿಕಾರವೆಂದರೆ ಶಮದಮಾದಿ ಸಾಧನಸಂಪತ್ತು. ಶೀಲ ಶುದ್ಧಿಯಾಗದೆ ಬ್ರಹ್ಮe್ಞÁನ ಸಾರ್ಥಕವಾಗಲಾರದು, ಎಂದು ದಾರ್ಶನಿಕರ ನಿಲುವು. ಸತ್ತ್ವಶುದ್ಧಿ ಮುಖ್ಯವಾದುದೆಂದು ಭಗವದ್ಗೀತೆ ಹೇಳುತ್ತದೆ. ಪ್ರಾಪಂಚಿಕವ್ಯವಹಾರಗಳಲ್ಲಿಯೇ ಆಸಕ್ತನಾಗಿರುವವನಿಗೆ ಬ್ರಹ್ಮe್ಞÁನದ ಅಧಿಕಾರವಿಲ್ಲ. ಅರತಿರ್ಜನ ಸಂಸದಿ, ದ್ವಂದ್ವಾತೀತೋ ವಿಮತ್ಸರಃ, ವೀತರಾಗಭಯಕ್ರೋಧಃ, ವಿಗತಜ್ವರಃ ಮುಂತಾದುವು ಅಧಿಕಾರವನ್ನು ಹೇಳುವ ಮಾತುಗಳು. ವೈರಾಗ್ಯವೂ ಅಧಿಕಾರಗಳಲ್ಲಿ ಒಂದು; ವೈರಾಗ್ಯವಿಲ್ಲದೆ ಏಕಾಗ್ರತೆ ಬಾರದು. ಅದು ಬಾರದೆ ಅನುಸಂಧಾನ ಸಿದ್ಧಿಸುವುದಿಲ್ಲ. ಇದಕ್ಕಾಗಿಯೇ ಪತಂಜಲಿಯ ಸೂತ್ರ ಅಭ್ಯಾಸ ವೈರಾಗ್ಯಾಭ್ಯಾಂ ತನ್ನಿರೋಧಃ-ಎಂದು ಚಿತ್ತವೃತ್ತಿ ನಿರೋಧದ ಉಪಾಯವನ್ನು ಹೇಳುತ್ತದೆ. ಶ್ರವಣ, ಮನನ, ನಿಧಿಧ್ಯಾಸನಗಳಿಗೆ ಬೇರೆ ಬೇರೆ ಅಧಿಕಾರವನ್ನೂ ಹೇಳುವ ಪರಿಪಾಠ ಉಂಟು. ಬ್ರಹ್ಮಜಿe್ಞÁಸುವಾದವನು ಗುರುವನ್ನು ಪಡೆದು, ಅವನಿಂದ ದೀಕ್ಷೆಯನ್ನು ಹೊಂದಬೇಕು ಎನ್ನುವ ವಿಧಿಯೂ ಇದೆ (ಆಚಾರ್ಯವಾನ್ ಪುರುಷೋ ವೇದ). ಹೀಗೆ ಗುರುವಿನ ಮುಖಾಂತರ ದೀಕ್ಷೆಯನ್ನು ತಳೆಯುವುದು ಅಗ್ರಅಧಿಕಾರ. ಗುರುವಿನ ಬಳಿ ಬ್ರಹ್ಮಚರ್ಯ ನಡೆಸಬೇಕು ಎನ್ನುವ ಮಾತಿನಲ್ಲಿ ಶೀಲಯುಕ್ತನಾಗಿ, ಅಧಿಕಾರಗಳನ್ನು ಪಡೆದುಕೊಳ್ಳಬೇಕು ಎನ್ನುವುದು ಸೂಚಿತವಾಗಿದೆ.										   
 
(ಎಸ್.ಕೆ.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ